Placement ಆದ ಖುಷಿಯಲಿ ಡಿಂಗ
ಮಜಾ ಮಾಡಿದ ಗೆಳೆಯರ ಸಂಗ
CS, Movies ಎಂದು ಸಮಯ ಕಳೆದ
Trekking ಅಂತ ಕಾಡೆಲ್ಲಾ ಅಲೆದ.
ಆದರೆ ಉಳಿಲಿಲ್ಲ ಈ ಸಂತೋಷ ಬಹುದಿನ
ಕಾಡಲು ಹತ್ತಿತು Project ಪ್ರತಿಕ್ಷಣ
Teammate Yeda, Guide ಆದ HOD
ಇಂತ combination ಬೇಡ ನೋಡಿ!!
ಗೊತ್ತಿಲ್ಲ ನಿನಗೆ ಏನೂ ಕೂಡ
ಮೊದಲು Project ಬಗ್ಗೆ ತಿಳಿದು ನೋಡ
ನಂತರ ಬಂದು ಕಾಣು ಎಂದು
ಬೈದು ಕಳಿಸಿದ Guide ಅಂದು.
ಡಿಂಗನು Research papers ಕಲೆಹಾಕಿದನು
ಎಲ್ಲಾ ಬಿಟ್ಟು ಅದನೋದುತ ಕುಳಿತನು
ಎಷ್ಟು ಓದಿದರು ತಲೆಗತ್ತಲಿಲ್ಲ
ಈ ಚಿಂತೆಯಲಿ ನಿದ್ದೆ ಬರಲಿಲ್ಲ.
Guide ನ ಕಾಟ ತಾಳದೆ ಡಿಂಗನು
ಕೊನೆಗೆ ಈ ರೀತಿ ನಿರ್ಣಯಕೆ ಬಂದನು
"ಮೊದಲಿನ ಹಾಗೆ cool ಆಗೆ ಇರುವೆನು
ಕೊಟ್ಟರೆ ಕೊಡಲಿ FF ಅವನು."
---ಡ್ರೀಮ್ ಕೋಟೆ