Friday, August 27, 2010

ಡಿಂಗನ ಗೋಳು

ಡಿಂಗನು ತಿಳಿದ final year ಚಂದ
Hostelಲ್ಲಿ ಇದ್ದರೆ ಇನ್ನೂ ಅಂದ
ನೋಡುವೆ movies ಆಡುವೆ ಆಟ
ಮುಗಿಯಿತು ಇನ್ನು lecturesಗಳ ಕಾಟ

ಆದರೆ ಬಂತು placement ಎಂಬ ವಿಘ್ನ
ಆಯಿತು ಇವನ ಕನಸುಗಳು ಭಗ್ನ
ಪ್ರತಿದಿನ ATBಲ್ಲಿ pptಯ ಕೊರೆತ
Apti ಬರೆವಾಗ ಎಲ್ಲಾ ಮರೆತ

Dream ನಲ್ಲಿ ಆಗೊ ಯೋಗ್ಯತೆ ಇಲ್ಲ
Normal ಬರೆಯಲು level ಬಿಡಲ್ಲ
C, C++ ಸರಿಯಾಗಿ ಬರೊಲ್ಲ
OS, DBS ಗೊತ್ತೇ ಇಲ್ಲ

ಹೀಗೇ ಆದರೆ ಹೇಗೋ ಡಿಂಗ
ಆಗುವೆ ನೀನು ಇಂಗು ತಿಂದ ಮಂಗ
ಎಂದು ಕೇಳಿದಾಗ ಗೆಳೆಯ ಅಂದು
ಕೊಟ್ಟನು ಉತ್ತರ higher studies ಎಂದು

-ಡ್ರೀಮ್ ಕೋಟೆ