ನೆನಪಿನಾಳದ ಗವಿಯಲ್ಲಿ ಬೆಳಕಾಗಿ ಕಾಣುತಿಹೆ
ಧರೆಗಿಳಿದು ಬಂದ ಸುರೆಯಂತೆ ನೀನು
ಹೃದಯದ ಪರಿಧಿಯೊಳು ಬಚ್ಚಿಟ್ಟ ಹೂವಾಗಿ
ಕಾಡುತಿಹೆ ನೀ ಎನ್ನ ಮನದ ದನಿಯಾಗಿ.
ತುಂಬಿದೆ ಬಾಳನ್ನು ನಿನ್ನ ಸವಿಯಾದ ನಗುವಿನಲಿ
ಬಳುಕುತಾ ಸಾಗಿದೆ ಝರಿಯಂತೆ ನೀ ಎನ್ನ ಮನದಲ್ಲಿ
ಮಳೆ ನಿಂತ ಮೇಲೆ ಕುಣಿದ ನವಿಲಂತೆ
ಗರಿಗೆದರಿ ಹಾಡಿತೀ ಮನ ನಿನ್ನ ಸನಿಹದಲಿ.
ಹರ್ಷದಿಂದ ಕುಣಿದಿದ್ದೆ ತಿಳಿದು,ನೀ ನನ್ನ ಬಾಳಿನ ಉದಯರಾಗ
ಆದರೇನು ತಿಳಿದಿತ್ತು ನೀ ಕೊನೆಯ ಚರಣದ ಸಂಧ್ಯಾರಾಗ
ಎಣಿಸಿದ್ದೆ ನೀ ಬೆಳಗುವೆ ಬಾಳನು ನಂದಾದೀಪದಂತೆ
ಆದರೆ ವಿಧಿಯೆಣಿಕೆಯಂತೆ ಬಂದು ತೆರಳಿದ್ದೆ ನೀ ಕೊಲ್ಮಿಂಚಿನಂತೆ.
--ಡ್ರೀಮ್ ಕೋಟೆ