ತಿಳಿದರೆ ಬಾಳೊಂದು ಪುಸ್ತಕವೆಂದು
ನಾ ಓದದೆ ಬಿಟ್ಟ ಪುಟವೊಂದು ನೀನು
ಯಾವ ಪುಟವನ್ನು ಬಿಟ್ಟರೂ ಆಗದು ಪುಸ್ತಕ ಪೂರ್ಣ
ಆದರೂ ಬಿಟ್ಟೆನೆತಕೆಂದು ತಿಳಿಯದು ಕಾರಣ
ತಿಳಿದೂ ಬಿಟ್ಟೆನಾ , ತಿಳಿಯದೆ ಬಿಟ್ಟೆನಾ
ಎಂಬ ಗೊಂದಲದಲ್ಲಿ ಮುಳುಗಿದೆ ಈ ಮನ
ತಿಳಿಯದೆ ಬಿಟ್ಟಿದ್ದರೆ ನನಗಿಂತ ದುರ್ದೈವಿಯಾರಿಲ್ಲ
ತಿಳಿದೂ ಬಿಟ್ಟಿದ್ದರೆ ನನಗಿಂತ ಮೂರ್ಖನಾರಿಲ್ಲ
ಏಕೋ ಏನೋ ಇಂದು ಆ ಪುಸ್ತಕವನ್ನು ಕೈಗೆತ್ತಿಕೊಂಡೆ
ಆಗ ಸುಳಿಯಿತು ನಿನ್ನ ನೆನಪು ಮಿಂಚಿನಂತೆ
ತಕ್ಷಣ ತಿರುವಿದೆ ಆ ಕಡೆ ಬೇರೆಲ್ಲವನು ಮರೆತು
ಆದರಲ್ಲಿ ಉಳಿದಿತ್ತು ಕೇವಲ ಹರಿದ ಹಾಳೆಯ ಗುರುತು.
ನಾ ಓದದೆ ಬಿಟ್ಟ ಪುಟವೊಂದು ನೀನು
ಯಾವ ಪುಟವನ್ನು ಬಿಟ್ಟರೂ ಆಗದು ಪುಸ್ತಕ ಪೂರ್ಣ
ಆದರೂ ಬಿಟ್ಟೆನೆತಕೆಂದು ತಿಳಿಯದು ಕಾರಣ
ತಿಳಿದೂ ಬಿಟ್ಟೆನಾ , ತಿಳಿಯದೆ ಬಿಟ್ಟೆನಾ
ಎಂಬ ಗೊಂದಲದಲ್ಲಿ ಮುಳುಗಿದೆ ಈ ಮನ
ತಿಳಿಯದೆ ಬಿಟ್ಟಿದ್ದರೆ ನನಗಿಂತ ದುರ್ದೈವಿಯಾರಿಲ್ಲ
ತಿಳಿದೂ ಬಿಟ್ಟಿದ್ದರೆ ನನಗಿಂತ ಮೂರ್ಖನಾರಿಲ್ಲ
ಏಕೋ ಏನೋ ಇಂದು ಆ ಪುಸ್ತಕವನ್ನು ಕೈಗೆತ್ತಿಕೊಂಡೆ
ಆಗ ಸುಳಿಯಿತು ನಿನ್ನ ನೆನಪು ಮಿಂಚಿನಂತೆ
ತಕ್ಷಣ ತಿರುವಿದೆ ಆ ಕಡೆ ಬೇರೆಲ್ಲವನು ಮರೆತು
ಆದರಲ್ಲಿ ಉಳಿದಿತ್ತು ಕೇವಲ ಹರಿದ ಹಾಳೆಯ ಗುರುತು.
--ಡ್ರೀಮ್ ಕೋಟೆ
No comments:
Post a Comment